ಜಗನಾದನ ಇಂಪು – ೫೦

ಜಗನಾದನ ಇಂಪು – ೫೦

(ಜ್ಞಾನ ಎಂಬ ಶಿವನ ಮತ್ತು ನನ್ನ ನಡುವೆ ಇರುವಂತಹ ನಿಷ್ಕಳಂಕ ಮನೋಜ್ಞ ಪ್ರೇಮದ ಬಗ್ಗೆ ಬರೆದಿದ್ದೇನೆ.)

ಶಿವನಿವ ತಾಂಡವವಾಡುತಲಿರುತಲಿ
ಡಿಂಡಿಮ ಢಮಢಮ ಗುಡುಗುವುದು|
ನಟ ನಡೆದಾಡುವ ಸಾಗುವ ಪಥದಲಿ
ಅಂತಿಮ ಘಮ ಮನ ಸೂಸುವುದು||
ಜಿನುಜಿನುಗೆನ್ನುತ ಚಿಮ್ಮುವ ತಿಮಿರೇ
ನೀ ಬಡೆಬಡೆದಾಡುತ ಬೆರಗದಿರು|
ಚರ ಅಚರಽ ಜನಕಽನಿವ ಮದಿರೇ
ನೀ ಸವಿಯುತಲಾಗುವೆ ಜ್ಞಾನದ ಅದಿರು||

ಡಮರುಽ ಶಂಕರ ಶ್ಲಾಘ ಭಯಂಕರ
ಸಾಂಬ ಸದಾಶಿವ ನಾಟ್ಯ ಝಂಕಾರ|
ತಾಂಡವ ನೃತ್ಯ ಮನೋಹರ ಕಾಲ
ಸುಗುಣ ನಿನಾದದಿ ಕಾಲ ಸುಕಾಲ||೧||

ತಿರುಗುವ ಕಾಲದೀ ತಾವರೆ ಕಾಣಿಸಿದೆ
ಕೆಸರಿನ ಕೆರೆಯಲಿ ತೇಲುತಲೀ|
ಕನಸಿನ ನೋಟವು ಮನಸನು ಕಾದಿಸಿದೆ
ಕಮಲ ಪಡೆಯಲದು ಬಯಸುತಲೀ||
ದಾಟಲು ತಿಳಿದೆನಗೆನಿತೋ ಮರ್ಮರ
ಕರ್ಕಶವಾಯಿತೊ ಮನ ಮಿಡಿತ|
ಕನಸನು ಕಾಣುತ ತಿರುಗಿದೆ ದುರ್ಧರ
ಶಿವನೆದೆ ಕಮಲಕೆ ನನ್ನಯ ತುಡಿತ||

ಡಮರು ಶಂಕರ ಶ್ಲಾಘ ಭಯಂಕರ
ಸಾಂಬ ಸದಾಶಿವ ನಾಟ್ಯ ಝಂಕಾರ|
ತಿರುಗುವ ಕಾಲದ ಮನದ ಅಹಂಕಾರ
ನಿರ್ಗುಣ ಜೋತ ತದೇಕ ಓಂಕಾರ||೨||

ಕಲರವ ರಮಿಸಿ ಸವಿಯೊ ಸುವ್ವಿ ರಾಗದಿ
ಪದುಮ ಪರಮ ಮನ ಭಕುತಿಯ ಸಾರಿ|
ಬಯಸಿಹೆ ಅದನು ನಾ ಕುಲುಮೆಲಿ ಚಾಗದಿ
ಅರಿಷಡ್ವರ್ಗವ ಸುಡುಲುತ ಭಾರಿ||
ಈಜಲು ಕಲಿಸಲು ಬಂದಿಹೆ ನೀನು
ಕೆಸರ ನಡುವೆ ಹಸನಾಗಿಸಿ ಸ್ಥೈರ್ಯದಿ|
ಕುಶೇಶಯ ಅರಳಿದೆ ನುಗ್ಗಲು ನಾನು
ನಡೆವೆ ಮುಂದೆ ಜಗನಾದನ ಧೈರ್ಯದಿ||

ಡಮರು ಶಂಕರ ಶ್ಲಾಘ ಭಯಂಕರ
ಸಾಂಬ ಸದಾಶಿವ ನಾಟ್ಯ ಝಂಕಾರ|
ತೇಲುವ ಕಾಯದ ಆಧರಸಾರ
ನಿಜಗುಣ ಮಾಯೆ ನೀ ಸಮರಸಕಾರ||೩||

-ಅಮೋಘಂ ನಾದಭೃಂಗ (Amogh Kodangala)

Spread the knowledge!

ಜಗನಾದನ ಇಂಪು – ೧೯

ಜಗನಾದನ ಇಂಪು – ೧೯

ಭಂಗ ಭೂಮಿಕಾ ಸಂಘ ಸಾರಿಪ
ಮನದ ಗಂಗೆಯು ಮುನಿದು ನಗುವಳು
ತ್ವರಿತ ವಾರಿಧಿ ಸುರಿಸಿ ನಗುವನು
ಸಂಘ ಪುಂಡರು ಎದ್ದು ನಿಂತರು!

ಕೇಳು ಜಗನಾದ ಕೇಳು
ಕೇಳು ಜಗನಾದ ಕೇಳು

ಮಂಜಿನ ಮಳೆ ತಂಪಿನ ಇಳೆ
ಒಂದು ಸೆಳೆದರೆ ಚಂದವು..
ಅಂದ ಚಂದಕೆ ಚೆಂಡೆ ನುಡಿದರೆ
ಸಂತವಾಣಿಯ ಋಣದ ವರವು…
ಎಲ್ಲೆ ಮೀರುತ ಮಹಾನ್ ಮಾರುತ
ತನ್ನ ಕಾಲ್ಗೆಜ್ಜೆಯ ಬಡಿಯುತ
ಭಂಗ ಭೂಮಿಕಾ ಭಂಗವಾದಳು
ತಂಪಿನ ಮಳೆ ಮಂಜು ಕವಿಸದೆ..

ಕೇಳು ಜಗನಾದ ಕೇಳು
ಕೇಳು ಜಗನಾದ ಕೇಳು

ಸೂಕ್ತ ಕಾರಂಜಿಯ ಬಯಸುತ,
ಸಂಘ ಕಳೆಗಳು ಮೂಕರಾಗುತ,
ಜಾಲಬಂಧನ ಎಣಿಸಿ ಸ್ಮರಿಸುತ,
ನಮಿತ ಕಣ್ಗಳ ಜಿನುಗು ಇರಿಸುತ.
ಎಲ್ಲೆ ಮೀರಲು ಮಹಾನ್ ಮಾರುತ,
ಕಾಲ ಗೆಜ್ಜೆಯು ಚೆಂಗ ಚೆಂಗುತ,
ಭಂಗ ಭೂಮಿಕಾ ಭಂಗವಾದಳು,
ಸೂಕ್ತ ಕಾರಂಜೀಯು ಚಿಮ್ಮದೆ…

ಕೇಳು ಜಗನಾದ ಕೇಳು
ಕೇಳು ಜಗನಾದ ಕೇಳು

ಎತ್ತ ನೋಡಿದರೆತ್ತ ಎತ್ತರ
ಬರುಡು ಪರ್ವತಶಯ್ಯವು..
ಸಂಘ ಪುಂಡರ ಶಂಖ ನಾದಕೆ
ನಂದನಂದನ ಆನಂದ ಕರುಣೆ
ಎಲ್ಲೆ ಮೀರಿದ ಮಹಾನ್ ಮಾರುತ
ಕಾಲ ಗೆಜ್ಜೆಯು ಸಡಿಲವಾಯಿತು
ಭಂಗ ಭೂಮಿಕಾ ಅಭಂಗವಾಗಲು
ಎತ್ತರೆತ್ತರ ಕಾರ್ಯನಡೆಯಿತು.

ಕೇಳು ಜಗನಾದ ಕೇಳು
ಕೇಳು ಜಗನಾದ ಕೇಳು

ಸಂಧ್ಯವಾಣಿಯು ಸಂಘ ಅರಿಯಲು
ಸಂಕೀರ್ತಿತ ನಂದನಂದನ..
ಎದ್ದು ಏಳುತ ದನಿಯಗೂಡುತ
ದಂಡವಾದರು ದಂಗುಬಡೆಸಲು.
ಎಲ್ಲೆ ಮೀರಿದ ಮಹಾನ್ ಮಾರುತ
ಕಾಲ ಗೆಜ್ಜೆಯು ಒಡೆದು ಹೋಯಿತು
ಭಂಗ ಭೂಮಿಕಾ ಅಭಂಗವಾಯಿತು
ಸಂಘ ಕರ್ಮಿಗಳೆಲ್ಲ ಸೇರಿ..

ಹಾಡು ಜಗನಾದ ಹಾಡು
ಹಾಡು ಜಗನಾದ ಹಾಡು

Spread the knowledge!

ಜಗನಾದನ ಇಂಪು – ೫೮

ಜಗನಾದನ ಇಂಪು – ೪೮

(ಜಗತ್ತಿಗೆ ಮೂಲ ಧಾತು ಆಗಿರುವಂತವಳು ಜಗನ್ಮಾತೆ ತ್ರಿಪುರ ಸುಂದರಿ, ಹಾಗು ಅವಳ ಪತಿರಾಯ ತ್ರಿಪುರಾಂತಕ ಅವರ ನಡುವಿನ ಸರಸ ಸಲ್ಲಾಪದ ವಿಷಯ.)

ರಾಗ: ಧೀರ ಶಂಕರಾಭರಣ
ತಾಳ: ಆದಿ

ಸುಂದರಿಽ ನೀ ಕೋಮಲಾಂಗಿ
ಬಂದರೆ ನೀ ಚಂದವೋಽ|
ಚಂದಕ್ಕಾಗಿದೆ ಚಂಚಲೆಯ ಮಳೆ
ಮಂದಾರ ಅರಳಿದೆ ಅಂದವೋಽ||ಪಲ್ಲವೀ||

ಕುಂಕುಮದ ಮೈಯಽ ಬಣ್ಣ
ಮೈಮನ ಸೆಳೆತ ಅಗಣ್ಯವೋ|
ಅರಿಶಿನ ಸೀರೆಯ ಉಡಿಸುವೆ ಬಾರೆ
ಬೇರೆಯದೆಲ್ಲ ನಗಣ್ಯವೋ||ಅನುಪಲ್ಲವೀ||

ತ್ರಿಪುರ| ಸುಂದರಿಽ ನೀ… |

ಏನಿದು ನಿನ್ನಯ ಸೌಂದರ್ಯ
ಮಾತಿಗೆ ಸಾಲದ ಬಣ್ಣವೋಽ|
ಇಬ್ಬನಿ ಹನಿ ಹನಿ ಚಿಮ್ಮಿದ ನೀ ಇನಿ
ನಯನಗಳಂದಕೆ ಸಮ್ಮನವೋ||
ಕಾಡುತಲಿರುವೆ ಕಣ್ಣಿಗೆ ಕಾಣದೆ
ಕರೆಯುತಲಿರುವೆ ನಾ ಭಯದಲ್ಲೆ|
ಧೀರನಾಗಲು ಹೊರಟೆ ನೋಡೆ
ಪೊಳಿಲೀ ರಾಜರಾಜೇಶ್ವರಿಯೇ||೧||

ಆದಿಯಲ್ಲಿ ಅಂಧಕಾರದಿ ನೀ
ಹಾಡಿದೆ ಮೊದಲು ಅಕಾರ|
ಸೋಜುಗ ನೀ ನೋಡಲೆಂದೆ
ತಂದೆ ನೀ ಭಾರಿ ಉಕಾರ||
ಮಂಜರಿಽಗೆ ಮಂದಳಾದೆ ನೀ
ಮಂದಹಾಸದ ಕೊನೆಯ ಮಕಾರ|
ಶಂಕರ ಪ್ರೇಮಾಂಕುರಕೆ ನಾಚಿದೆ
ಪೊಳಿಲೀ ರಾಜರಾಜೇಶ್ವರಿಯೇ||೨||

ಅಯ್ಯೋ ರಾಗಿಣಿ ಹಾಡಲಿ ಕುಳಿತೆ
ಸುಂದರ ಕನಸಿನ ಸಾಲುಗಳಲ್ಲಿ|
ಸಾಲುಗಳಾಚೆಗೆ ಕಾಲುವೆಯಲ್ಲಿ
ಹಾಡಿನ ಇಂಪಿಗೆ ನೀ ಧಾರೆಯಾದೆ||
ನೀನಿರೆ ನನ್ನಯ ಭಾಷೆಗಳಲ್ಲಿ
ಐಸಿರಿ ತುಂಬುತ ತುಳಕುವುದು|
ಆಭರಣ ಆದರ ನೀನೆ ನನ್ನದು
ಪೊಳಿಲೀ ರಾಜರಾಜೇಶ್ವರಿಯೇ||೩||

ಧೀರ ಶಂಕರಾಽಽಭರಣ
ರಾಗದೀ ಹಾಡಲು ಕುಂತಿರುವೆ|
ಕಂಚಿನ ವೀಣೆಯ ತಂತಿಗಳಲ್ಲಿ
ನಾದಭೃಂಗ ನಾನಾಗಿರುವೆ||
ತಂತಿಯ ಮೀಟಲು ಸರಿಗಮ ಎನ್ನುವೆ
ಜಗನಾದನ ತಾಳಕೆ ಕುಣಿತಿರುವೆ|
ಕುಣಿ ಕುಣಿ ಎನ್ನುತ ನೀ ಜೊತೆ ಸೆರುವೆ
ಪೊಳಿಲೀ ರಾಜರಾಜೇಶ್ವರಿಯೇ||೪||

– ಅಮೋಘಂ ನಾದಭೃಂಗ (Amogh Kodangala)

Spread the knowledge!

ನಿನ್ನ ಆರಿಸಿದ ಹೃದಯ…..

ನಿನ್ನ ಆರಿಸಿದ ಹೃದಯ……

ರಾಗ: ಭೈರವೀ

ತಾಳ: ೪/೪

ನನ್ನ ಕಣ್ಣಲ್ಲೇ ಸಂದಿಹ ಬಿಂಬ,
ಎದುರಲ್ಲೇ ನಿನ್ನದೇ ರೂಪ,
ಬಾನೆತ್ತರ ಪ್ರೀತಿ ಜ್ವಾಲ,
ನಿನಗರಿಯದೆ ನಡೆದ ಭಾವ..
ನಿನ್ನನ್ನೇ ನೋಡುವ ಕಾವು,
ಹೇಗೇಗೋ ಬೆಳೆದಿದೆ ನೋಡು,
ನೀನೆಲ್ಲಿಗೋ, ನಾನಲ್ಲಿಗೇ,
ಬೆಂಬಿಡದೆ ಬರುವ ಬಯಕೇ…
ಏನಿಂತಹ ಸೆಳೆತನವೋ, ಏನಿಂತಹ ಸಂಘರ್ಷವೋ,
ನನಗರಿಯದ ಅರಿತ ಪ್ರೀತಿ, ಹೇಗೆ ಹೇಳಲೀ ನಿನಗೇ?
ನನ್ ಹೃದಯ ನಲಿಯುತಿದೆ
ನನ್ ಹೃದಯ ಕುಣಿಯುತಿದೆ,
ನಿನ್ನ ಆರಿಸಿದ ಹೃದಯ,
ಕುಣಿಯುತಿದೆ, ನಲಿಯುತಿದೆ…||೧||

ಆ ಮುಂಗುರಳಾ ಸರಿಸು ,
ನಿನ್ನೇ ನೋಡುವ ತವಕ,
ಮಿಡಿಯುತಿದೆ-ಮಡಿಯುತಿದೇ, ಈ ಮನ
ಈ ಮನ ಹಂಬಲದ ಹೆಂಮ್ಮರ..
ನಿನಗ್ಹೇಗೆ ತಿಳಿಯುದು? ನನ್ನ
ಮನದ ಮಂಥನದ ಘಾಸಿ,
ಹೇಗಿದನು ನಿನ್ನೋಡನೇ,
ತಂದಿಡುವುದು ಮಂಥನಪಾಣಿ.
ಏನಿಂತಹ ಮೋಡಿಯೋ, ಏನಂತಹ ಮಾಟವೋ,
ನಿನಗರಿಯಲು ನನ್ನ ಪ್ರೀತಿಯ, ಹೇಗೆ ಹೇಳಲೀ ನಿನಗೇ?
ನನ್ ಹೃದಯ ನಲಿಯುತಿದೆ
ನನ್ ಹೃದಯ ಕುಣಿಯುತಿದೆ,
ನಿನ್ನ ಆರಿಸಿದ ಹೃದಯ,
ಕುಣಿಯುತಿದೆ, ನಲಿಯುತಿದೆ…||೨||

ನಿಂತರೂ, ನೀನೆಲ್ಲೇ ನಿಂತರೂ,
ನಿಂತಲ್ಲೇ ಪ್ರಕಾಶಿಸುವೇ ನೀನು.
ನಿನ್ನದೇ ಕಾಂತಿಗೇ ಕರಗುತಾ,
ನಿಂತಲ್ಲೇ ಕಳೆದೋಗುವೇ ನಾನು.
ಐದಂಗಳ ಸುತ್ತಿ ಸುತ್ತಿ,
ನನ್ನಕಣ್ಣಿಗೆ ಕಾಣದೇ ಹೋದರೇ,
ಸೂರ್ಯನಿಲ್ಲದ ಬಾನು ನಾನು,
ಓ ಅಕ್ಷಯ ಅಕ್ಷರ ಕಾಂತಿ.
ಏನಿಂತಹ ಸಂಚಲನವೋ, ಏನಿಂತಹ ರೋಮಾಂಚನವೋ,
ನಿನಗರಿಸಲು ನನ್ನ ಪ್ರೀತಿ, ಹೇಗೆ ಹೇಳಲೀ ನಿನಗೇ?
ನನ್ ಹೃದಯ ಹುಡುಕುತಿದೆ,
ನಿನ್ನನ್ನೇ ಅರಸುತಿದೆ,
ನಿನ್ನ ಆರಿಸಿದ ಹೃದಯ,
ಅರಸುತಿದೆ,ಹುಡುಕುತಿದೆ.
ನನ್ ಹೃದಯ ನಲಿಯುತಿದೆ
ನನ್ ಹೃದಯ ಕುಣಿಯುತಿದೆ,
ನಿನ್ನ ಆರಿಸಿದ ಹೃದಯ,
ಕುಣಿಯುತಿದೆ, ನಲಿಯುತಿದೆ.||೩||

– ಅಮೋಘಂ ನಾದಭೃಂಗ (Amogh kodangala)

Spread the knowledge!

ಜಗನಾದನ ಇಂಪು – ೪೭

ಜಗನಾದನ ಇಂಪು – ೪೭

(ಪ್ರಕೃತಿಯ ಕೆಲ ನಿಗೂಢ (ಭೌತಶಾಸ್ತ್ರದ) ಸಂಗತಿಗಳು ಅರಿವಿಲ್ಲದೇ ಅರಿವಾಗುವಂತಿರುತ್ತವೆ. ಇವುಗಳನ್ನು ರಾಧಾಕೃಷ್ಣರ ಭಾವದಲ್ಲಿ ತೋರಿಸುವಲ್ಲಿ ಪ್ರಯತ್ನ ನಡೆಸಿದ್ದೇನೆ.)

ರಾಗ: ರೇವತಿ
ತಾಳ: ಆದಿ

ಅವಳ ಕಂಡು ನಕ್ಕನು ಮನಮೋಹನ ಸುಮಗಾನನು
ಕರ ಕಂಕಣಗಳ ನಾದಕೆ ಅವನೆರಗಿ ಕರಗಿ ಸೋತನು|
ಅವನೇನು ಎಂದು ಕೇಳಲು ಅವಳಂದದಿಂದ ನಕ್ಕಳು
ವರಮಾನದ ತನು ಲಜ್ಜೆಯ ಅಪರಂಜಿ ರಾಧಾಕೃಷ್ಣರು||೧||

ಗೋಪಗೋಽಪಿಯರೊಡನೆ ತರು ನಟ್ಟ ನಡುವಿನಲಿ
ತೂಗು ಉಯ್ಯಾಲೆಯು ಅದರೆತ್ತರದ ಕೊಂಬೆಯಲಿ|
ಲೋಲಽ ಲೋಲಿಹನು ಲೋಲಕವನು ಲೋಲಿಸುತ
ಲಕಲಕನೆ ಹೊಳೆಯುತಿಹ ಅಪರಂಜಿ ರಾಧಾಕೃಷ್ಣರು||೨||

ನಂದನ ಆನಂದದ ಕೂಸೆಂಬುದು ಜಗತ್ ಜಾಹಿರ
ಮೋಹದಿ ಅವ ಕೂಡಿಡನದು ಮನದ ಘನಽ ಪಂಜರ|
ಬಂದಳವಳು ಚೆಂದದ ಚೆಂದುಳ್ಳಿಯ ಬಿನ್ನಾಣಳು
ಮೋಹ ತೊರೆದ ಪ್ರೇಮದ ಅಪರಂಜಿ ರಾಧಾಕೃಷ್ಣರು||೩||

ಲೋಕದ ಮನ ಸಾಗರಕೆಽ ಸುತ್ತಲು ಚಿತ್ ವಿಸ್ಮಯ
ಸೋಜುಗವು ಕಾದಿದೆ ಅದರಾಳಕೆ ನಿರ್ವಾಙ್ಮಯ|
ಅರವತ್ತು ನಾಲ್ಕರ ಅವನ್ ವಿದ್ಯೆಯ ಪಾರಂಗತನು
ವಿದ್ಯಾರ್ಚಿತ ಮಾನದ ಅಪರಂಜಿ ರಾಧಾಕೃಷ್ಣರು||೪||

ಜ್ಞಾನದ ಬೆಣ್ಣೆಯ ಹೊತ್ತು ತತ್ವದ ಪದ ಹಾಡುತಿರಲು
ಅಮ್ಮಽ ಯಶೋಽದೆಯೊಡನೆ ಕಾಡಾಡಿ ಪಳಗುತಿಹನು|
ಅಮ್ಮ ಅವಳ್ ಅಮ್ಮ ಋಣದ ಅಮ್ಮ ಅಂತೆನ್ನುತವಳು
ಕಿವಿಹಿಡಿಸುತ ಒಂದಾದ ಅಪರಂಜಿ ರಾಧಾಕೃಷ್ಣರು||೫||

ಅಯ್ಯೋ ಅಯ್ಯೋ ರಾಧೇ ನೀನೆಲ್ಲಿ ಕಳೆದು ಹೋಗುವೆ
ಅಯೋಮಯ ನಲ್ಲ ಅವನು ಇಲ್ಲಿ ಹುಡುಕ ಬಂದನೇ|
ನೋಡು ನೋಡು ಕಾಡದಿರು ಕುರುಡು ಬೆರಽಗಾಗದಿರು
ನಯವಾದ ಕುಸುರಿಗೆ ಅಪರಂಜಿ ರಾಧಾಕೃಷ್ಣರೇ||೬||

ನಿಂತಿರಲು ನಿಲ್ಲದವನ ಕುಳಿತಿರಲು ಕೂರದವನ
ಯೋಜನೆಯನು ಅರಿತವಳೇ ಶರವೇಗದಿ ವೃದ್ಧಿಸಿಹೆ|
ಕಂಸನ ಆಡಂಬರದ ದಾಂಧಲೆಯ ದಂಗು ಬಿಡಲು
ಬಲವಾದ ಬಿರುಕಾಗಿ ಅಪರಂಜಿ ರಾಧಾಕೃಷ್ಣರೇ||೭||

ತಂತನನನ ನಾದದ ಹುಚ್ಚೆಬ್ಬಿಸುವ ಈ ಸಂಗತಿಯು
ಅಂಬುದಿಯಲಿ ಆಘಾತ ತರಂಗದ ಹೊಡೆದಾಟವು|
ಅಪ್ಪಳಿಸಿದ ಚೆಂಗೆನ್ನೆಗೆ ನಾದಭೃಂಗ ರಂಗನು
ಜಗನಾದಗೆ ಸಲಹೆಂದನು ಅಪರಂಜಿ ರಾಧಾಕೃಷ್ಣಗೆ||೮||

-ಅಮೋಘಂ ನಾದಭೃಂಗ
(Amogh Kodangala)

Spread the knowledge!

ಜಗನಾದನ ಇಂಪು – ೪೯

ಜಗನಾದನ ಇಂಪು – ೪೯

(ಮನುಷ್ಯ ತಾನು ಇರುವ ರೀತಿಗೆ ಏನು ಯೋಚಿಸುವನೋ ಏನೋ ಗೊತ್ತಿಲ್ಲ. ಆದರೆ ಆತ ಇರುವ ರೀತಿಗೆ ನ್ಯೂಟನ್ ಅವರ ಚಾಲನೆ ನಿಯಮಗಳಲ್ಲಿ ಉತ್ತರ ಕೊಡಲು ಪ್ರಯತ್ನಿಸಿದ್ದೇನೆ.)

ಆಗು ಹೋಗುದರ ನಡುವಲೀ

ನೀ ಏನ ಹುಡುಕಲು ಹೊರಟಿಹೆ|

ಕಾದು ಕುಳಿತಿಹ ಕಾಲವು

ಕನವರಿಕೆಯಲೆ ಕುಳಿ ಬಿಡಿಸಿದೆ||

ಬೀಳೆನೆಂಬ ಹುಂಬನು

ನೀ ತಲೆಯ ಒಳಗಡೆ ತುಂಬಿರೇ|

ನಿನ್ನ ಸುತ್ತು ಹರಿಸಿದ ಕಾಲವು

ಮೇಲ್ಯಾವುದೆಂದು ಕೇಳದೇ||||

ರಭಿಸುತಿರುವ ಲೋಕವು

ನೀ ನಿಂತರೆ ಅದು ಒಲ್ಲೀತೇ|

ಜಗವು ಮುನಿದರೆ ನೇರ ನಡೆವೆ ನೀ

ನೋವ ತಿಂದರೂ ನಗುತ ಉರುಳುವೆ||

ಆವೇಗದ ವೆತ್ಯಾಸ ಬಿದ್ದರೆ

ಬಲದ ಹಿಡಿತವು ಜಟಿಲವಾಗುದು|

ನಡೆವೆ ಎಂದರೂ ನೆಡೆಯಲಾಗದು

ಭೂಮಿ ಬೇಕು ಮುನ್ನಡೆಗೆ||||

ನಡೆಯುದಾದರೆ ನಡೆ ನೀ ಮುಂದೆ

ಕಳೆಯುದಾದರೆ ಕಳೆ ನೀ ಇಂದೆ|

ಎಲ್ಲೇ ನಡೆದರೂ ಏನೇ ಕಳೆದರೂ

ನೆಲೆಯು ತಡೆದರೆ ನೀನೇ ಹಿಂದೆ||

ನೋಟ ಒಪ್ಪದ ಭಾವಗಳಲಿ

ಕಾಟ ಕಾಡುವ ಕಾವುಗಳಲಿ|

ನೋಟಕ್ಕೊಂದೇ ಕಾಟಕ್ಕಿಂದೇ

ಜಗನಾದನಾನನ ಮರೆಯಲಿರಲೀ||||

– ಅಮೋಘಂ ನಾದಭೃಂಗ ( Amogh Kodangala)

Spread the knowledge!