( ಇದೊಂದು Monologue… ಸ್ವಗತವಾಗಿ ಓದುದರ ಖುಷಿಯೇ ಬೇರೆ… ಒಂದು ಸಿನಿಮಾದಲ್ಲಿ ಒಂದೇ ಕ್ಯಾರೆಕ್ಟರ್ ಇದ್ರೇ ಆತನಿಗೆ ಎಷ್ಟು ಆಕ್ಟಿಂಗ್ ಫ್ರೀಡಂ ಸಿಗುತ್ತೆ ಅಂದ್ರೇ… ಇದು ಓದೀ ಅನುಭವಿಸಿ… ಭಾವಿಸಿ… )
…ರಾತ್ರಿ ಗುಡಗ್ತಾ ಇದ್ಹಾಗೆ ಎಚ್ಚ್ರ ಆಗಿ ನೆನ್ಪಾಗಿದ್ದು, ನಿನ್ನೆ ಆನ್ ಮಾಡಿ ಇಟ್ಟ ಕಂಪ್ಯೂಟರ್. ಪಟ್ಟ್ ಅಂತ ಹೋಗಿ ಆಫ್ ಮಾಡಿ ಬಂದೆ. ಹಾಗೆ ‘ಫೋನ್ ಎಲ್ಲೀ?’ ಅಂತ ಮೊಬೈಲ್ ಅರಸರನ್ನ ಹುಡುಕೊದನ್ನ ಮಾಡಿದೇ… ಅಷ್ಟ್ಹೊತ್ತಿಗೆ..
“ಏನೋ ನಿನ್ ಗೋಳು… ರಾತ್ರಿ ಅಂತ ಇಲ್ಲ ಹಗ್ಲು ಅಂತ ಇಲ್ಲ… ಹೋಗೊ ಮಲಗ್ಕೊ…”, ಅಂತ ಅಮ್ಮ..
ಅಯ್ಯೋ ಇವ್ಳಿಗೇನ್ ಗೊತ್ತು.. ನಮ್ ಫೋನ್ ಸಿಗ್ದೇ ಒದ್ದಾಡ್ತಿದಿನೀ ಅಂತ!! ನಾನ್ ಏನೂ ಮಾತಾಡ್ದೇ ನಾಳೆ ಹುಡ್ಕಣಾ ಅಂತ ಹಂಗೇ ಮಲ್ಗಣಾ ಅಂತ ಬಂದೆ..
ಇದೇನು.. ಫೋನು ನಾ ಮಲ್ಗಿರೋ ಬ್ಲಾಂಕೆಟ್ ಮೇಲೆನೇ ಇದೆ.. ಹಾಂ ಇನ್ ಸಿಗ್ತಲ್ವ.. ಓಪನ್ ಮಾಡಿ ನೋಡೋಣ ಅಂತ ಎತ್ದೇ.. ಟೈಮು ಹನ್ನೆರ್ಡು ಘಂಟೆ.. ಹಂಗೇ ಏನೋ ಸ್ವಲ್ಪ ನೋಡಿ ಮಲಗೋಣ ಅಂತ ಮನ್ಸು ಮಾಡ್ದೇ..
ಎಲ್ಲೋ ಮೂಲೆಲಿದ್ದ ಅವ್ಳ ಫೋಟೋ ಪಾಪ್ ಆಯ್ತು.. ಅವ್ಳು ತುಂಬ ಚೆನಾಗಿದ್ಳು.. ಗೊಂಬೆ ತರಹ… ನನ್ನ ಬಿಟ್ಟು ಐದ್ ವರ್ಷ ಆಯ್ತು… ಹಳೇದೆಲ್ಲ ನೆನ್ಪು ಹಂಗೇ ಇದೆ.. ಅವ್ಳು ನನ್ನ ಬಿಟ್ಟು ಇನ್ನೊಬ್ಬನ್ನ ಆರ್ಸಿದಕ್ಕೆ ಬೇಜಾರಿಲ್ಲ ಆದ್ರೇ, ನಾನು ಇನ್ನೂ ನೆನ್ಪಿಡೋ ತರಹ ಹಸಿ ಘಾಯದ್ ನೆನ್ಪು ಹಂಗೇ ಕೊಟ್ಟಿದ್ದು ತುಂಬಾ ನೋಯಿತ್ತಾ ಇದೇ…
ಹಾಂ.. ಹೆಸ್ರೇಲ್ಲ ಯಾಕ್ ಬೇಕು ಹೇಳಿ… ಆದ್ರೂ ಹೇಳ್ತಿನೀ..
ಯಾಕಂದ್ರೇ ನೀವು ನನ್ ಬೆಸ್ಟ್ ಫ್ರೆಂಡ್ ಅಲ್ವಾ.. ಹ್ಹಹ್ಹಹ್ಹ… ಯಾಕೋ ಕಣ್ ಒದ್ದೆ ಆಗತಪ್ಪಾ… ಮನ್ಸು ಭಾರ ಆಗ್ತಿದೆ.. ಅಷ್ಟುಽ ಪ್ರೀತ್ಸಿದ್ದೆ ನಾನು ಅಂತ ಅನ್ಸತ್ತೆ.. ನಾನು ಬೇರೆ ಹೆಣ್ಮಕ್ಳನ್ನ ತುಂಬಾ ನೋಡ್ತೀನಿ, ಹ್ಹಹ್ಹ… ಈ ಸೀಕ್ರೇಟ್ ನಮ್ಮಲ್ಲೇ ಇರ್ಲೀ.. ಈಗಂತೂ ನಾನು ಟೀಚರ್, ಕೇಳ್ಬೇಕೇ.. ಹೆಣ್ಣ್ಮಕ್ಳು ಸುಮಾರು ಓಡಾಡ್ತಾ ಇರ್ತಾರೆ.. ಚೆನಾಗಿರೋರ್ನೂ ನೋಡಿದೀನಿ ಇಲ್ದೇ ಇರೋರೂ ನೋಡಿದೀನಿ.. ಆದ್ರೇ ಈ ಯಮ್ಮಂಗಿರೋ ಸೆಳೆತ ಬೇರೆ ಯಾರ್ಮೇಲೂ ಆಗ್ತಿಲ್ಲ… ಇದ್ರ ಅರ್ಥ ಅವ್ಳನ್ನ ಮರಿಯಕ್ಕಾಗ್ತಾ ಇಲ್ಲ ಅಂತ… ಆಕಾಶಕ್ ಏಣಿ ಇಟ್ರೇ ನಮ್ಗೆಲ್ಲ ಆಗತ್ತಾ?.. ಹಾಂ… ಅಲ್ಲಿಗೇನೆ ಬರ್ತೀನಿ… ಹೆಸ್ರು ಹೇಳ್ತೀನಿ..
ಅನ್ರಿತಾ… ಅಂತ..
ಹೆಸ್ರೇ ಈ ತರಹ ಇದೆ.. ಇನ್ನು ಅವ್ಳು ಹೇಗಿರ್ಬಹುದು.. ಅಲ್ವಾ…
ಅದಿರ್ಲೀ ನಾನ್ ನಿಮ್ಗೆ ಈಗ ಕಾಲ್ ಯಾಕ್ ಮಾಡಿದ್ದು ಅಂದ್ರೇ.. ಹಾಂ ಆಯ್ತಾಯ್ತು ವಿಷ್ಯ ಮಗುಚಿ ಹಾಕಲ್ಲ… ಅದು ದೊಡ್ಡ್ ವಿಷ್ಯನೇ ಇದೆ.. ಅವ್ಳ ಬಗ್ಗೆ ಈ ರಾತ್ರೀ ಅದೂ ಫೋನ್ಲೀ ಹೇಳಕ್ಕಾಗಲ್ಲ.. ಅರ್ಥ ಮಾಡ್ಕೊಳೀ.. ಹ್ಹಹ್ಹ.. ಒಂದಲ್ಲ ಎರಡಲ್ಲ…
ಸರೀ ಬೆಳಿಗ್ಗೆ ಕಾಲೇಜ್ಗ್ ಹೋಗ್ತೀರಾ?…
ಹೋದ್ರೇ ಒಂದ್ ಹೆಲ್ಪ್ ಮಾಡೀ.. ಒಂದಿಷ್ಟ್ ನಂದಿನಿ ಬೈಟ್ಸ್ ತಕ್ಕೊಂಬನ್ನಿ… ಯಾಕೆ ಅಂತ ಕೇಳ್ದ್ರೆ ಹೆಂಗೇ?
ನಿಮ್ದುಕೆ ಇವತ್ತು ಬರ್ತ್ ಡೇ ಹೈ ನಾ… ಹ್ಹಹ್ಹಹ್ಹ ಡೋರ್ ಓಪನ್ ಮಾಡೀ…
ಅದೇ ನಿಮ್ ಮನೇದೇ… ನಿಮ್ಮ್ ಮನೇದ್ ಅಲ್ದೇ ಪಕ್ಕದ್ ಮನೇಯೋರ್ದು ಓಪನ್ ಮಾಡ್ತೀರಾ…
(……)
ಡೋರ್ ಓಪನ್ ಮಾಡಕ್ಕೂ ಇಷ್ಟ್ ಹೊತ್ತು ಬೇಕೇನ್ರೀ ನಿಮ್ಗೇ…
” ಹ್ಯಾಪಿ ಬರ್ತ್ ಡೇ ಟೂ ಯೂ… ಹ್ಯಾಪಿ ಬರ್ತ್ ಡೇ ಟೂ ಯೂ… ಹ್ಯಾಪಿ ಬರ್ತ್ ಡೇ ಟು ಡೀಯರ್ ವಿಭಿನ್ನಾ”
ಕಟ್ ಮಾಡ್ರೀ ಕೇಕು… ರೀ… ಕಟ್ಮಾಡ್ರೀ… ವಿಭಿನ್ನಾ.. ವಿಭಿನ್ನ ತ್ರಿವೃತಾ ಅವ್ರೇ… ನಿಮ್ಗೇ ಬಾಯ್ ಬರಲ್ಲ ಅಂತ ಮಾತ್ರ ಗೊತ್ತಿತ್ತು… ಇವಾಗ ಕಿವಿನೂ ಕೇಳ್ಸಲ್ವಾ….
ಅಳ್ತಾ ಇದೀರೇನ್ರೀ… ಇವಾಗ್ಲೇ ಅತ್ರೇ ಹೆಂಗೇ? ಓಹ್ ಖುಷೀಲಾ?… ಹಂಗೇ ಖುಷೀಲೀ ಈ ರಿಂಗೂ ತಗೊಂಡು ನನ್ನ ಮದ್ವೆ ಆಗ್ಬಿಡೀ… ತುಂಬಾ ಪ್ರೀತಿಸ್ತಿದೀನಿ ನಿಮ್ಮನ್ನ… ಅಯ್ಯೋ ಇವಾಗ್ಯಾಕೆ ಅಳ್ತಾ ಇದೀರಾ? ತುಂಬಾ ಆಸೆ ಇಂದ ತಗೊಂಬದಿದ್ದು ನಾನು.. ನೀವು ರಿಜೆಕ್ಟ್ ಮಾಡಿದ್ರೆ ನನ್ ಹಾರ್ಟು ಇಜೆಕ್ಟ್ ಆದಂಗ್ ಆಗತ್ತೆ..
ನೋಡೀ… ಎಲ್ಲಾ ಹೆಣ್ಮಕ್ಳು ಹೇಳೋ ತರಹ “ನಿಮ್ಗೆ ನನ್ಕಿಂತ ಒಳ್ಳೆ ಹುಡ್ಗಿ ಸಿಗ್ತಾಳೆ ನಾನು ಮೂಗಿಬೇರೆ..” ಅದು ಇದೂ ಅಂತ ಅಂದ್ರೇ ಸರೀ ಇರಲ್ಲ…ಹೋ ನೀವ್ ಎಲ್ಲ್ ಹೇಳ್ತೀರಾ ಬಿಡಿ.. ಅನ್ರಿತಾ ನಾ ಆ ಯಮ್ಮನ್ ಸಹವಾಸ ಬೇಡ.. ಎಷ್ಟ್ ಗೋಗರ್ದ್ರೂ ನನ್ ನೋವು ಅವ್ಳಿಗ್ ಗೊತ್ತೇ ಆಗಿಲ್ಲ… ಬಿಡೀ ಅವ್ಳು ಮದ್ವೇ ಆಗಿ ಆರಾಮಾಗಿದಾಳೆ…ಹಾಗೇ ನಂಗೂ ಆರಾಮಾಗಿರ್ಬೇಕ್ರೀ… ಒಪ್ಕೊಳ್ರೀ.. ನೋಡೀ ನಾನು ಸುಮ್ಸುಮ್ನೇ ಪ್ರಪೋಸ್ ಮಾಡ್ತಿಲ್ಲ… ಇಷ್ಟ್ ದಿವ್ಸಾ ಬೇರೇ ಹುಡ್ಗಿರ್ನ, ಅವ್ಳನ್ನ ಮರೀಬೇಕು ಅಂತ ಕ್ಯಾಶುವಲ್ಲಾಗಿ ಪ್ರಪೋಸ್ ಮಾಡ್ತಿದ್ದೇ… ಈಗ ನಿಮ್ಮನ್ನ ತುಂಬಾ ಇಷ್ಟ ಪಟ್ಟು ಮಾಡ್ತಿದೀನಿ..
ಹೂಂ… ಸರೀ ಟೈಮ್ ಬೇಕಾ… ಸರೀ… ಹೋಗಿ ಮಲ್ಕೊಳ್ಳಿ… ಜಾಗೃತೇ ಒಬ್ರೇ ಬೇರೆ ಇದೀರಾ… ಈ ಲಾಕ್ ಡೌನ್ ಆದ್ಮೇಲೆ ಊರಿಗ್ ಹೋಗ್ಬಹುದಿತ್ತಲ್ವಾ… ಓಹ್ ನಿಮ್ ಮಹಾ ಕೆಲ್ಸಾ… ಸರೀ ಸರೀ ಮಲ್ಕೊಳಿ…
ಈ ಮೂಕ ಹೂನೇ ನಾನ್ ಪಟಾಯ್ಸಕ್ಕಾಗಿಲ್ಲ ಅಂದ್ರೇ… ನಮ್ಗೆಲ್ಲ ಇನ್ಯಾರ್ ಬೀಳ್ತಾರೇ… ಮುದ್ಕ ಆಗೊದ್ಯೋ ನಾದಭೃಂಗ… ನನ್ ಅಳು ನಾನೇ ಕೇಳ್ಕೊಬೇಕು ಅಷ್ಟೆ…