Home Health & Beauty ಸಿರಿಧಾನ್ಯದ ಜನಪ್ರಿಯತೆ ಹೆಚ್ಚಾಗಿದೆ ,ಸಿರಿಧಾನ್ಯ ಸೇವಿಸಿದರೆ ಮಧುಮೇಹ ಬರುವುದಿಲ್ಲವೇ?

ಸಿರಿಧಾನ್ಯದ ಜನಪ್ರಿಯತೆ ಹೆಚ್ಚಾಗಿದೆ ,ಸಿರಿಧಾನ್ಯ ಸೇವಿಸಿದರೆ ಮಧುಮೇಹ ಬರುವುದಿಲ್ಲವೇ?

ಸಿರಿಧಾನ್ಯಗಳು ಹಲವಾರು ವೋಷಕಾಂಶಗಳಿಂದ ಕೂಡಿದೆ.

by admin

ಧಾನ್ಯಗಳು ನಮ್ಮ ಪೂರ್ವಜರ ಆಹಾರ ಕ್ರಮ. ನಮ್ಮ ಪೂರ್ವಜರಿಗೆ ರಾಗಿ, ನವಣೆ ಇವೆಲ್ಲಾ ಪ್ರಮುಖ ಆಹಾರವಾಗಿತ್ತು. ನಮ್ಮ ಪೂರ್ವಜರು ಅಷ್ಟೊಂದು ಆರೋಗ್ಯಕರವಾಗಿದ್ದರು, ಆದರೆ ನಮಗೇಕೆ ಈ ರೀತಿ ಆರೋಗ್ಯ ಸಮಸ್ಯೆ ಕಾಡುತ್ತಿದೆ ಎಂದು ಚಿಂತಿಸುವಂಥ ಪರಿಸ್ಥಿತಿ, ಅದಕ್ಕೆ ಪ್ರಮುಖ ಕಾರಣ ನಮ್ಮ ಆಹಾರಕ್ರಮ. ಇದರ ಅರಿವು ಎಲ್ಲರಿಗೂ ಆಗುತ್ತಿದೆ , ಜನರು ಮತ್ತೆ ತಮ್ಮ ಆಹಾರದಲ್ಲಿ ಸಿರಿಧಾನ್ಯ ಸೇರಿಸಲಾರಂಭಿಸಿದ್ದಾರೆ. ಧಾನ್ಯಗಳು ನಮ್ಮ ಸಾಂಪ್ರದಾಯಿಕ ಆಹಾರಗಳು. ಹತ್ತಾರು ಸಾವಿರ ವರ್ಷಗಳ ಹಿಂದೆಯೇ ಧಾನ್ಯಗಳನ್ನು ಮಾನವರು ಬೆಳೆಯುತ್ತಿದ್ದರು. ನಮ್ಮ ಪ್ರಾಚೀನ ಕವಿಗಳು ಅಂದಿನ ಕಾಲದ ಆಹಾರಕ್ರಮದ ಬಗ್ಗೆ ಬರೆದಿದ್ದಾರೆ. ಅಂದರೆ ನಮ್ಮ ಸಾಹಿತ್ಯ ಕೃತಿಗಳಿಂದಲೂ ಸಿರಿಧಾನ್ಯಗಳ ಮಹತ್ವವನ್ನು ತಿಳಿದುಕೊಳ್ಳಬಹುದು. ಆಹಾರ ಪದಾರ್ಥಗಳಲ್ಲಿ ಧಾನ್ಯಗಳೇ ಅತ್ಯಂತ ಹಳೆಯ ಆಹಾರ. ರಾಗಿ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಬರಗು, ಕೊರಲೆ ಇವು ಕೆಲವು ಧಾನ್ಯಗಳು. ಈ ಧಾನ್ಯಗಳ ಕಾಳುಗಳು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ಇವುಗಳನ್ನು ಕಿರುಧಾನ್ಯಗಳು ಎನ್ನುತ್ತಾರೆ. ಅಕ್ಕಿ, ಗೋಧಿ ಮತ್ತು ಜೋಳದ ಹೊರತಾಗಿ ದೊರೆಯುವ ಧಾನ್ಯಗಳೇ ಕಿರುಧಾನ್ಯಗಳು. ಇವುಗಳು ದುಂಡಗೆ ಹಲವು ಬಣ್ಣಗಳಲ್ಲಿವೆ. ಈ ಒಂದೊಂದು ಕಿರುಧಾನ್ಯಕ್ಕೂ ಅದರದ್ದೇ ಆದ ಸ್ವಂತ ರುಚಿಯಿದೆ. ಕೆಲವು ಕಿರುಧಾನ್ಯಗಳು ಸ್ವಲ್ಪ ಸಿಹಿಯಾಗಿದ್ದರೆ ಕೆಲವು ಸ್ವಲ್ಪ ಸಪ್ಪೆಯಾಗಿವೆ. ಈ ಕಿರುಧಾನ್ಯಗಳಿಗೇ ಸಿರಿಧಾನ್ಯಗಳು ಎಂಬ ಹೆಸರೂ ಬಂದಿದೆ. ಸಿರಿ ಎಂದರೆ ಸಂಪತ್ತು. ಧಾನ್ಯ ಎಂದರೆ ಕಾಳುಗಳು. ಸಿರಿಧಾನ್ಯಗಳೆಂದರೆ ಪೌಷ್ಟಿಕಾಂಶಗಳೆಂಬ ಸಂಪತ್ತು ತುಂಬಿರುವ ಕಾಳುಗಳು. ಈ ಧಾನ್ಯಗಳ ಬಣ್ಣಗಳಲ್ಲಿ ವ್ಯತ್ಯಾಸವಿದ್ದರೂ ಆಕಾರದಲ್ಲಿ ಸಾಮ್ಯತೆ ಇದೆ. ಕೆಲವು ಸಿರಿಧಾನ್ಯಗಳಲ್ಲಿ ನಾರಿನಂಶ ಹೆಚ್ಚು. ಇನ್ನು ಕೆಲವು ಸಿರಿಧಾನ್ಯಗಳಲ್ಲಿ ಅಕ್ಕಿ, ಗೋಧಿಗಿಂತ ಹತ್ತು ಪಟ್ಟು ಹೆಚ್ಚಿನಕ್ಯಾಲ್ಸಿಯಂ ಮತ್ತು ಇತರ ಖನಿಜಗಳಿರುತ್ತವೆ. ಇತ್ತೀಚಿನ ಕೆಲವು ಸಂಶೋಧನೆಗಳು ಕೂಡಾ ಸಿರಿಧಾನ್ಯಗಳಿಂದ ಮಾಡಿದ ಆಹಾರ ಆರೋಗ್ಯಕ್ಕೆ ಉತ್ತಮ ಎಂದು ಹೇಳಿವೆ. ಇಂದು ಜಗತ್ತಿನಾದ್ಯಂತ ಸಾವಿರಕ್ಕೂ ಮೇಲ್ಪಟ್ಟು ಬೇರೆ ಬೇರೆ ಧಾನ್ಯಗಳನ್ನು ಬೆಳೆಯಲಾಗುತ್ತದೆ. ಈ ಬೆಳೆಗಳನ್ನು ಬೆಳೆಯುವ ದೇಶಗಳಲ್ಲಿ ನಮ್ಮ ಭಾರತ ಅಗ್ರಸ್ಥಾನದಲ್ಲಿದೆ. ಸಿರಿಧಾನ್ಯಗಳ ಕೃಷಿಯು ಕೇವಲ ಸಾಂಪ್ರದಾಯಿಕ ಕೃಷಿಯಲ್ಲ. ಇದೊಂದು ವಿಶೇಷ ಮತ್ತು ವಿಶಿಷ್ಟ ಕೃಷಿಯಾಗಿದೆ. ಈಗೆಲ್ಲಾ ಒಂದು ಪ್ರದೇಶದಲ್ಲಿ ಒಂದೇ ಬೆಳೆಯನ್ನು ಬೆಳೆಯುತ್ತಾರೆ. ಹಿಂದೆಲ್ಲಾ ಒಂದೇ ಕಾಲದಲ್ಲಿ ಒಂದೇ ಪ್ರದೇಶದಲ್ಲಿ ಇಂತಹ ಕನಿಷ್ಠ ಹತ್ತು ಬೆಳೆಗಳನ್ನು ಬೆಳೆಯುತ್ತಿದ್ದರು. ಆಗೆಲ್ಲಾ ಅಕ್ಕಿ, ಗೋಧಿಗಿಂತಲೂ ನವಣೆ, ಸಜ್ಜೆಯ ಸೇವನೆಯೇ ಹೆಚ್ಚಾಗಿತ್ತು. ಮಳೆ ಕಡಿಮೆಯಾಗಲಿ, ಬಿಸಿಲು ಹೆಚ್ಚಾಗಲಿ ಯಾವ ಸಮಯದಲ್ಲಾದರೂ ಸಿರಿಧಾನ್ಯಗಳನ್ನು ಬೆಳೆಯಬಹುದಿತ್ತು. ಎಲ್ಲಕ್ಕಿಂತ ಮುಖ್ಯವಾಗಿ ಸಿರಿಧಾನ್ಯಗಳನ್ನು ಬೆಳೆಯಲು ಫಲವತ್ತಾದ ಭೂಮಿಯೇ ಬೇಕು ಎಂದಿಲ್ಲ. ತೆಳ್ಳನೆಯ ಮಣ್ಣಿನ ಪದರದ ನೆಲದಲ್ಲಿಯೂ ಸಿರಿಧಾನ್ಯಗಳು ಚೆನ್ನಾಗಿ ಬೆಳೆಯುತ್ತವೆ. ಕಲ್ಲಿನ ಜಮೀನಿನಲ್ಲಿ ಹಾರಕ ಹಾಗೂ ಕೊರಲೆ ಬೆಳೆಯುತ್ತವೆ. ಇಂತಹ ವಿಶಿಷ್ಟ ಗುಣಗಳಿಂದಲೇ ಸಿರಿಧಾನ್ಯಗಳು ರೈತರಿಗೆ ವರದಾನವಾಗಿರುವ ಬೆಳೆಗಳಾಗಿವೆ. ಈ ಧಾನ್ಯಗಳನ್ನು ಬೆಳೆಯಲು ರೈತರು ರಾಸಾಯನಿಕ ಗೊಬ್ಬರವನ್ನು ನೆಚ್ಚಿಕೊಂಡಿಲ್ಲ. ಕೊಟ್ಟಿಗೆ ಗೊಬ್ಬರ, ತರಗೆಲೆ ಗೊಬ್ಬರ ಬಳಸಿ ಸಿರಿಧಾನ್ಯಗಳನ್ನು ಬೆಳೆಯುತ್ತಾರೆ. ಇದರಿಂದ ಹಣ ಉಳಿದಿದೆ ಜೊತೆಗೆ ರಸಗೊಬ್ಬರ ಬಳಸದಿರುವುದರಿಂದ ಕೀಟಗಳ ತೊಂದರೆಯ ಪ್ರಶ್ನೆಯೇ ಇಲ್ಲ. ಹಾಗಾಗಿ ಈ ಬೆಳೆಗಳನ್ನು ಕೀಟಮುಕ್ತ ಬೆಳೆಗಳು ಎನ್ನಬಹುದು. ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೇ ಇರುವುದರಿಂದ ಪರಿಸರದ ಮೇಲೂ ಕೆಟ್ಟಪರಿಣಾಮ ಬೀರುವುದಿಲ್ಲ.

ಸಿರಿಧಾನ್ಯಗಳ ವಿಧಗಳು.

ರಾಗಿ ,ನವಣೆ, ಜೋಳ, ಸಜ್ಜೆ, ನವಣೆ, ಸಾಮೆ, ಹಾರಕ, ಬರಗು

ಪ್ರತಿನಿತ್ಯ ಸಿರಿಧಾನ್ಯಗಳನ್ನು ಆಹಾರಕ್ರಮದಲ್ಲಿ ಸೇರಿಸುವುದರಿಂದ ಈ ಪ್ರಮುಖ ಪ್ರಯೋಜನಗಳನ್ನು ಪಡೆಯಬಹುದು.

1. ಜೀರ್ಣಕ್ರಿಯೆಗೆ ಒಳ್ಳೆಯದು

ಸಿರಿಧಾನ್ಯಗಳಲ್ಲಿ ನಾರಿನಂಶ ತುಂಬಾ ಚೆನ್ನಾಗಿರುತ್ತದೆ. ಆದ್ದರಿಂದಾಗಿ ಸಿರಿಧಾನ್ಯಗಳ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಗೆ ತುಂಬಾ ಅನುಕೂಲವಾಗುತ್ತದೆ . ಅಷ್ಟೇ ಅಲ್ಲದೆ ಸಿರಿಧಾನ್ಯಗಳಲ್ಲಿ ಪ್ರೀಬಯೋಟಿಕ್‌ ಅಧಿಕವಿದೆ, ಇದು ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದ್ದರಿಂದ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು.

2.ಮಧುಮೇಹವನ್ನು ನಿಯಂತ್ರಿಸುತ್ತದೆ

ನಮ್ಮ ದೇಶದಲ್ಲಿ ಮಧುಮೇಹಿಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಲೇ ಇದೆ. ಸಿರಿಧಾನ್ಯಗಳು ದೇಹದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ. ಕೆಲವರು ಮಧುಮೇಹ ಬಂದ ಸಿರಿಧಾನ್ಯ ತಿಂದು ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತಾರೆ. ಮಧುಮೇಹ ಬರುವ ಮುನ್ನವೇ ಸಿರಿಧಾನ್ಯ ನಮ್ಮ ಆಹಾಕ್ರಮದಲ್ಲಿ ಇದ್ದರೆ ಈ ಮಧುಮೇಹದ ಆತಂಕವೇ ಇಲ್ಲದೆ ಬದುಕಬಹುದು.

3. ಹೃದಯದ ಆರೋಗ್ಯಕ್ಕೆ ಒಳ್ಳೆಯದು

ಸಿರಿಧಾನ್ಯಗಳು ಹೃದಯದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಇದು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ, ಆರೋಗ್ಯಕರ ಮೈ ತೂಕ ಕಾಪಾಡಲು ಸಹಕಾರಿ. ಆದ್ದರಿಂದ ಹೃದಯ ಸಂಬಂಧಿ ಸಮಸ್ಯೆ ತಡೆಗಟ್ಟಲು ಸಿರಿದಾನ್ಯಗಳು ಸಹಕಾರಿಯಾಗಿವೆ . ಮಿಲ್ಲೆಟ್ ಆರೋಗ್ಯಕರ ಕೊಬ್ಬನ್ನು ಹೊಂದಿರುತ್ತವೆ ಮತ್ತು ಟ್ರೈಗ್ಲಿಸರೈಡ್‌ಗಳು ಮತ್ತು ಕೊಲೆಸ್ಟ್ರಾಲ್ ಅನ್ನು ಗಮನಾರ್ಹವಾಗಿ ನಿಯಂತ್ರಿಸುತ್ತದೆ. ಸಿರಿಧಾನ್ಯದಲ್ಲಿರುವ ನಿಯಾಸಿನ್ ಅಥವಾ ವಿಟಮಿನ್ ಬಿ 3 ಅಂಶವು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಮತ್ತು ಹೆಚ್ಚಿನ ಮಟ್ಟದ ಕೊಲೆಸ್ಟ್ರಾಲ್ ಮತ್ತು ಟ್ರೈಗ್ಲಿಸರೈಡ್‌ಗಳನ್ನು ಕಡಿಮೆ ಮಾಡಲು ಸಹಕಾರಿಯಾಗಿದೆ. ಹೀಗಾಗಿ ವೈದ್ಯರು ಹೃದಯದ ಆರೋಗ್ಯಕ್ಕೆ ಮಿಲ್ಲೆಟ್‌ ಉತ್ತಮ ಎನ್ನುತ್ತಾರೆ

4. ಕೊಲೆಸ್ಟ್ರಾಲ್ ನಿಯಂತ್ರಿಸುತ್ತದೆ

ವಯಸ್ಸು 40 ದಾಟುತ್ತಿದ್ದಂತೆ ಬಹುತೇಕರಿಗೆ ಕೊಲೆಸ್ಟ್ರಾಲ್ ಸಮಸ್ಯೆ ಕಾಡುವುದು ಇತ್ತೀಚಿನ ದಿನಗಳಲ್ಲಿ ಸಹಜವಾಗಿದೆ . ಈ ಕೊಲೆಸ್ಟ್ರಾಲ್ ನಿಯಂತ್ರಿಸಲು ಸಿರಿಧಾನ್ಯಗಳ ಆಹಾರಕ್ರಮ ತುಂಬಾನೇ ಪ್ರಯೋಜನಕಾರಿ.

5. ಸಿರಿಧಾನ್ಯಗಳಲ್ಲಿ ಗ್ಲುಟೀನ್ ಇರುವುದಿಲ್ಲ

ಸಿರಿಧಾನ್ಯಗಳಲ್ಲಿ ಗ್ಲುಟೀನ್ ಇರುವುದಿಲ್ಲ, ಗ್ಲುಟೀನ್ ರಹಿತ ಆಹಾರ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಅಲ್ಲದೆ ಈ ಆಹಾರ ಸೇವನೆ ಆಕ್ಸಿಡೇಟಿವ್ ಸ್ಟ್ರೆಸ್ ಕೂಡ ತಡೆಗಟ್ಟಲು ಸಹಕಾರಿಯಾಗಿದೆ. ಸಿರಿಧಾನ್ಯಗಳ ಅನೇಕ ಪ್ರಯೋಜನಗಳಲ್ಲಿ ಒಂದಾದ ಅವು ಅಂಟು ಮುಕ್ತವಾಗಿದ್ದು, ಗ್ಲುಟೆನ್ ಅಲರ್ಜಿ ಮತ್ತು ಕರುಳಿನ ಸಮಸ್ಯೆ ಹೊಂದಿರುವವರಿಗೆ ಸೂಕ್ತವಾಗಿವೆ ಎಂದು ವೈದ್ಯರು ಹೇಳುತ್ತಾರೆ. ಇದಲ್ಲದೆ, ಮಿಲ್ಲೆಟ್ ಮೈಕ್ರೋಬಯೋಮ್‌ನೊಳಗೆ ಪ್ರೋಬಯಾಟಿಕ್‌ಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ, ಇದು ಕರುಳಿನ ಆರೋಗ್ಯ ಮತ್ತು ಸೂಕ್ಷ್ಮ ಪೋಷಕಾಂಶಗಳ ಹೀರಿಕೊಳ್ಳುವಿಕೆಯಲ್ಲಿ ಪಾತ್ರವನ್ನು ವಹಿಸುತ್ತದೆ.

6. ಆ್ಯಂಟಿಆಕ್ಸಿಡೆಂಟ್ ಅಧಿಕವಿದೆ

ಸಿರಿಧಾನ್ಯಗಳಲ್ಲಿ ಆ್ಯಂಟಿಆಕ್ಸಿಡೆಂಟ್ ಅಧಿಕವಿರುವುದರಿಂದ ಇದನ್ನು ತಿನ್ನುವುದರಿಂದ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು.ಸಿರಿಧಾನ್ಯಗಳು “ಹೆಚ್ಚಿನ ಪ್ರೋಟೀನ್‌ಗಳು, ವಿಟಮಿನ್ ಎ, ಸಿ, ವಿಟಮಿನ್ ಬಿ ಕಾಂಪ್ಲೆಕ್ಸ್, ಮೆಗ್ನೀಸಿಯಮ್, ಕ್ಯಾಲ್ಸಿಯಂ ಮತ್ತು ಫಾಸ್ಪರಸ್‌ನ ಸಮೃದ್ಧ ಮೂಲಗಳಾಗಿದ್ದು, ಪೂರ್ತಿ ಆರೋಗ್ಯಕ್ಕೆ ಸಹಕಾರಿಯಾಗಿದೆ. ಯಾರು ಸಿರಿಧಾನ್ಯಗಳ ಆಹಾರಕ್ರಮ ಪಾಲಿಸುತ್ತಾರೋ ಅವರಿಗೆ ಮೈ ಬೊಜ್ಜು ಬರುವುದಿಲ್ಲ . ಗಟ್ಟಿಮುಟ್ಟಾದ ಮೈಕಟ್ಟು ಹೊಂದಿರುತ್ತಾರೆ. ಸಿರಿಧಾನ್ಯ ಸೆವಿಸುವುದರಿಂದ ನಿಮ್ಮ ಆರೋಗ್ಯಕ್ಕೆ ಒಳ್ಳೆಯದು,ಅನಾವಶ್ಯಕವಾಗಿ ಆಸ್ಪತ್ರೆಗಳಿಗೆ ಹಣ ಹಾಕುವುದು ತಪ್ಪುತ್ತದೆ .

ಕೊನೆಯಮಾತು.

ಸಿರಿಧಾನ್ಯಗಳು ಹಲವಾರು ವೋಷಕಾಂಶಗಳಿಂದ ಕೂಡಿದೆ ಎಂದು ಈಗಾಗಲೇ ಹಲವು ಸಂಶೋದನೆಗಳು ಹೇಳಿವೆ . ವಿಟಮಿನ್, ಪ್ರೋಟೀನ್, ಕ್ಯಾಲ್ಷಿಯಂ, ಕಬ್ಬಿಣ, ನಾರು ಸೇರಿದಂತೆ ಆರೋಗ್ಯವಂತ ಮನುಷ್ಯನಿಗೆ ಅಗತ್ಯವಿರುವ ಎಲ್ಲ ರೀತಿಯ ಪೋಷಕಾಂಶಗಳನ್ನುಇವುಗಳು ಒದಗಿಸುತ್ತವೆ . ರಾಗಿಯಯಲ್ಲಿ 7.70 ಗ್ರಾಂ. ಪ್ರೋಟೀನ್, 67 ಗ್ರಾಂ. ಸಿಎಚ್‌ಒ, 350 ಮಿಲಿ ಗ್ರಾಂ. ಕ್ಯಾಲ್ಷಿಯಂ, 3.9 ಮಿ.ಗ್ರಾಂ. ಕಬ್ಬಿಣ, 3.6 ಗ್ರಾಂ. ನಾರಿನ ಅಂಶವಿರುತ್ತದೆ. ಇನ್ನು ನವಣೆಯಲ್ಲಿ 5 ಗ್ರಾಂ. ಪ್ರೋಟೀನ್, 60.9 ಗ್ರಾಂ. ಸಿಎಚ್‌ಒ, 15 ಮಿಲಿ ಗ್ರಾಂ. ಕ್ಯಾಲ್ಷಿಯಂ, 31 ಮಿ.ಗ್ರಾಂ. ಕಬ್ಬಿಣ, 4.3 ಗ್ರಾಂ. ನಾರಿನ ಅಂಶವಿದೆ. ಸಜ್ಜೆ ಅತ್ಯಂತ ಸಂಪತ್ಭರಿತವಾಗಿದ್ದು, ಇದರಲ್ಲಿ 11.80 ಗ್ರಾಂ. ಪ್ರೋಟೀನ್, 72 ಗ್ರಾಂ. ಸಿಎಚ್‌ಒ, 42 ಮಿಲಿ ಗ್ರಾಂ. ಕ್ಯಾಲ್ಷಿಯಂ, 11 ಮಿ.ಗ್ರಾಂ. ಕಬ್ಬಿಣ, 2.3 ಗ್ರಾಂ. ನಾರಿನ ಅಂಶವಿರುತ್ತದೆ. ಇದರೊಂದಿಗೆ ಅಗತ್ಯ ಪ್ರಮಾಣದ ಕೊಬ್ಬಿನ ಅಂಶ ಕೂಡ ಇವುಗಳಲ್ಲಿದೆ. ಸಿರಿಧಾನ್ಯಗಳ ಬಳಕೆ ಸೂಕ್ತ ಎನ್ನುತ್ತಾರೆ ತಜ್ಞರು. ಒಳ್ಳೆಯ ಆಹಾರವನ್ನು ಸೇವಿಸಿ ಆರೋಗ್ಯದಿಂದ ಇರೋಣ. ಏಕೆಂದರೆ , ಆರೋಗ್ಯವೇ ಬಾಗ್ಯ.

Spread the knowledge!

You may also like

Leave a Comment

About Us

We’re a media company. We promise to tell you what’s new in the parts of modern life that matter. Lorem ipsum dolor sit amet, consectetur adipiscing elit. Ut elit tellus, luctus nec ullamcorper mattis, pulvinar dapibus leo. Sed consequat, leo eget bibendum sodales, augue velit.

Join Our Newsletter

@2022 – All Right Reserved. Designed and Developed by Siddhrans Technologies

Are you sure want to unlock this post?
Unlock left : 0
Are you sure want to cancel subscription?
-
00:00
00:00
Update Required Flash plugin
-
00:00
00:00