ನಾದಭೃಂಗಂಗೆ ಅವಳ ನಿಷ್ಕಲ್ಮಶ ನಗು ಮರೆಯಾದ ಕಥೆ – ೧

ಸಿನಿಮಾ

ಒಳ್ಳೆ ಸಿನಿಮಾ ಸಿಗುತ್ತಾ ಅಂತ ಟೀ.ವಿ.ಲೀ ಚ್ಯಾನಲ್ಗಳನ್ನ ತಿರ್ಗಸ್ತಿದ್ದೆ. ಅಷ್ಟ್ರಲ್ಲೀ ಹಲಸಿನ್ ಕಾಯಿ ನೋಡಿದೇ. ಓಹ್ ಹಲಸಿನ್ ಕಾಯಿ ಗಸಿನೋ ಪಲ್ಯನೋ ಮಾಡ್ತಾರೇನೋ ಅಂತ ಖುಷಿಯಾಗಿ ಚ್ಯಾನಲ್ ಇಟ್ಟೆ.

“ಈ.. ಹಲಸು ಕದ್ದ ಕಳ್ಳ.. ಗಿಣ್ಣನು ಮಾಡಿ ತಿಂದ..”

ಆ… ಇದೇನಪ್ಪಾ .. ಅಂತ ನೋಡಿದ್ರೇ…

“ಕದ್ದ ಹಲಸುಽ ತಿಂದು ಮೆರೆದರೆ..

ಸಿಕ್ಕ ಗಿಣ್ಣನು ತಿನುವನು..”,

ನೋಡ್ರಪ್ಪ ನ್ಯೂಸು.. ಅದಕ್ಕೆ ನಾನೂ ಶುರು ಮಾಡಿದೆ..

‘ಮಂದವಾಣಿಯೇ ಸಿಗದೇ ನಿಮಗೆ…

ಒಳ್ಳೆ ಸುದ್ದಿಯು ನಿಮ್ಮ ಕಡೆಗೆ..

ಕದ್ದ ಗುಜ್ಜೆಯ ಮರದಲಂಟಿಸಿ

ಪುಣ್ಯ ತುಂಬಿಸಲಾರಿರೇ…’,

ಗುಜ್ಜೆ ಅಂದ್ರೆ ಗೊತ್ತಾಯ್ತಲ್ವ… ಹಲಸು…

ಅದ್ಕೆ ಅದು,

“ಒಂದು ಬಾರಿಯು ಹಲಸನೆಳೆದು…

ಎರಡು ಬಾರಿಯು ಇಳಿದು ಕಟ್ಟಿಸಿ…

ಸೂಕ್ತವಲ್ಲದ ಸಮಯದಲ್ಲಿ

ತುಂಬಿದ್ಹಲಸು ತಂದನು…”

ಆಹಾ!! ನಮ್ಗೋ ಅದು ಪ್ರಸನ್ನವಾಗಿ,

‘ಗುಜ್ಜೆಗಳ್ಳನ ಥಳಿಸಬೇಡಿ…

ಕದ್ದದೊಂದು ಗುಜ್ಜೆಯಲ್ಲವೇ..

ಹಿಡಿದದೊಂದು ಗುಜ್ಜೆಯಾದರೆ

ತಿಂದುದ್ಹೇಗೆ ಗಿಣ್ಣನು?!…’

ನಾನ್ ಇನ್ನೂ ಸೇರಿಸಿ,

‘ಮುಂದೆ ಬರುವ ಗುಜ್ಜೆಗಳಲೀ..

ಹಿಂದೆ ಸುರಿವ ಸೋನೆಗಳಲೀ…

ಒಟ್ಟುಗೂಡಿದ ಅಂಟುಗಳನೂ

ಗಿಣ್ಣು ಮಾಡಿ ತಿನುವರೇ?!..’

ಅಷ್ಟರಲ್ಲಿ,

“ಇದೀಗ ಬಂದ ಬ್ರೇಕಿಂಗ್ ನ್ಯೂಸ್ನಲ್ಲಿ ಒಂದು ಚಿಕ್ಕ ತಪ್ಪು ನಮ್ಮಿಂದ ಆಗಿದ್ದು… ನಮ್ಮನ್ನು ಕ್ಷಮಿಸಬೇಕು… ಕನ್ನಡದ ೭ ಕೋಟಿ ಜನರಲ್ಲಿ ಕ್ಷಮೆಯಾಚಿಸ್ತಿದ್ದೇವೆ.. ಹಸು ಎಂಬುದರ ಬದಲು ಚಿತ್ರ ಸಹಿತ ಹಲಸು ಎಂದು ಆಗಿದ್ದು.. ಒಂದು ಅಚಾತುರ್ಯ ಆಗಿದ್ದಕ್ಕೆ ಕ್ಷಮೆ ಇರಲೀ…”

ಆಹಾ…. ಇದಪ್ಪ ವರಸೆ… ಅಯ್ಯಾ ಬುದ್ಧಿ ಜೀವಿಗಳೇ… ನಿಮ್ಮ ಬುದ್ಧಿ ಎಲ್ಲಿಟ್ಟಿದೀರಾ… ನಾನೂ ಸಿಕ್ಕಿದ ಟೈಮ್ಗೇ ಸರಿಯಾಗಿ ಇಟ್ಟೆ …. ಸ್ವಾರೀ ಗೋಮಾತೇ…

ಈ ಸುದ್ಧಿಗಳನ್ನ ಹೇಳೋರು ಎಷ್ಟು ಮಾರಕರೋ, ಅಷ್ಟೇ ಮೂರ್ಖರು… ಛೇ… ಬಿಡಿ ಬೇರೆ ಚ್ಯಾನಲ್ ಹಾಕ್ತೀನಿ..

ಅಪ್ಪ ಕೋಣೆ ಇಂದ ಬಂದು, ಫೋನ್ನಲ್ಲಿ ಮಾತಾಡ್ತಾ,

“ಹಾಂ ಹಾಂ… ಸರಿ ಸರಿ… ಬಾರೋ ರೆಡಿಯಾಗು… ನಮ್ ದೊಡ್ಡಮ್ಮ ಹೋಗ್ಬಿಟ್ರಂತೆ.. ಬೇಗ… ಇವತ್ತೇ ಕೆಲ್ಸ ಮಾಡ್ತಾರಂತೆ…”

“ಹಾಂ ಸರೀ ಸರೀ…”

ಅಪ್ಪ,” ಅಲ್ ಹೋಗ್ತಾ ಕಾರಲ್ಲಿ ಏನಿಲ್ಲ ಅಂದ್ರೂ ಎರಡು ಘಂಟೆ ಬೇಕು ಅಲ್ವಾ…”

“ಹಾಂ ಹೌದಪ್ಪ… ಇಲ್ಲಿಂದ ಕಾರ್ಕಳ ವೈಯ ಶೃಂಗೇರಿ ಹೋಗೋದಾದ್ರೇ ಅಷ್ಟಾಗತ್ತೇ…”

ಅಪ್ಪ, “ಹೂಂ… ಸರಿ ಸರಿ…”

ಹಂಗೇ ಪಂಚೆ ಉಟ್ಟ್ಕೊಂಡು ಅಮ್ಮ, ನಾನು, ಅಪ್ಪ ಎಲ್ಲ ಹೊರಟ್ವಿ…

ಮದ್ಯಾಹ್ನ ಆಗಿರೋದ್ರಿಂದ ಈ ಸೆಖೆಯ ಮಂಗ್ಳೂರು ಬಿಟ್ಟ್ ಹೋಗೋ ಟೈಮ್ ಚೆನ್ನಾಗಿದ್ದೇ ಆಗಿತ್ತು..

ಸಂಡೇ ಆಗಿರೋದ್ರಿಂದ ಫುಲ್ ಟ್ರಾಫಿಕ್ ಹಾಗೆ ಹೇಗೋ ಗಾಡೀ ಎಳ್ಕೊಂಡ್ ಬಂದೆ..

ಸೂಪರ್ ಫಾಸ್ಟ್ ಆಗಿ ಬಂದಿದ್ರಿಂದ ಶೃಂಗೇರಿ ಬಂದಿದ್ದು ಗೊತ್ತೇ ಆಗ್ಲಿಲ್ಲ.. ನೀವೇ ಎಣ್ಸಿ ನಾನ್ ಹೇಗ್ ಬಂದಿದ್ ಇರ್ಬಹುದು ಅಂತ… ನಮ್ ಅಪ್ಪ ಎಲ್ರ ಅಪ್ಪನ್ ತರಹನೇ.. ಫಾಸ್ಟ್ ಹೋಗೋವಾಗ್ಲೆಲ್ಲ ನನ್ ಮುಂದಿರೋ ವಿಂಡ್ ಶೀಲ್ಡ್ ಮೇಲೆ ಕೈ ಇಡ್ತಿದ್ರು.. ನಾನ್ ಅದ್ಕೆ ತಲೆ ಕಡ್ಸ್ಕೊಳ್ದೇ ರೋಂಯ್ಗುಟ್ಟಿ ಬಂದಿದ್ದೇ ಬಂದಿದ್ದು.. ಯಾಕಂದ್ರೇ ಅದು ನನ್ ಫೇವರೇಟ್ ಅಜ್ಜಿ ತೀರ್ಕೊಂಡಿದ್ದು.

ಅವ್ರ ಮೊಮ್ಮಕ್ಳೆಲ್ಲ ಬೋಂಬೇ, ಡೆಲ್ಲಿಲಿ ಬೆಳ್ದಿದ್ದು.. ಇಲ್ಲಿಗೆ ಬಂದ್ರೆ ‘ಆಯ್ಸ ಗಿಯ್ಸ’ ಹಿಂದಿ ಇಂಗ್ಲೀಷ್ ಲೇ ಮಾತಾಡ್ತಿದ್ರು.. ಆ ಭಾಷೆಗಳು ಈ ಅಜ್ಜಿಗ್ ಬರ್ಬೇಕೇ.. ನಾನೋ ಅಪ್ಪಟ ಕನ್ನಡಿಗ… ಕನ್ನಡದಲ್ಲೇ ಮಾತಾಡೋದು… ಆವಾಗ್ಲೇ ನಿಮ್ಗೆ ನನ್ ಭಾಷಾ ಪಾಂಡಿತ್ಯ ಗೊತಾಯ್ತಲ್ವ…ಹಾಂ ಅದ್ಕೇ ನಮ್ ಅಜ್ಜಿ ನನ್ನ ಹಚ್ಕೊಂಡಿರ್ತಿದ್ರು.. ನಾನೂ ಅದೇ… ಅಂದ ಹಾಗೆ ಅವ್ಳ ಹಸರು.. ಸರಸ್ವತೀ ಅಂತ.. ನಮ್ ಅಜ್ಜಂದು ದೊಡ್ಡ ಅತ್ತಿಗೆ… ಇಲ್ಲೀ ತನಕ ಹಿರಿಯೋರು ಅಂತ ಇದ್ದಿದ್ದೂ ಅವಳೇ.. ಎಲ್ರೂ ಅವ್ಳು ಮಾತು ಮೀರುತಿರ್ಲಿಲ್ಲ.. ಅಂತ ಸೂಪರ್ ಅಜ್ಜಿ..

ನಾನ್ಯಾಕೆ ಯಾವ್ ಚಿಂತೆ ಇಲ್ದೇ ಮಾತಾಡ್ತಿದೀನಿ ಅಂತ ಅಂದ್ಕೊಂಡ್ರಾ… ನಮ್ ಅಜ್ಜಿ, ಅಂದ್ರೇ ನನ್ ಅಜ್ಜಿ ಒಂದ್ ದಿವ್ಸ, ದೀಪಾವಳಿ ಸ್ನಾನದ್ ದಿವ್ಸ ಅಭ್ಯಂಜನಕ್ಕೆ ಎಣ್ಣೆ ಹಚ್ತಿದ್ಳು.. ಈ ಸರಸ್ವತಿ ಅಜ್ಜಿ ಸರಸರ ಅಂತ ಬಂದು..

“ಲೇ ಹಿಮಾವಂತೀ… ನಾನ್ ಹಚ್ತೀನೇ ನಾದಂಗೆ… ಚಿಕ್ಕಲ್ಲಿಂದ ನಾನೇ ತಾನೆ ಮಾಡ್ತಾ ಇದ್ದಿದ್ದು…”

ಅದಿಕ್ಕೆ ನಮ್ ಅಜ್ಜೀ, “ಹೋಗಮ್ಮಾ ತಾಯಿ… ನನ್ ಮೊಮ್ಮಗಂಗೆ ಸ್ನಾನ ಮಾಡ್ಸೋ ಭಾಗ್ಯ ಇಷ್ಟ್ ವರ್ಷ ನೀನೇ ತಗೊಂಡೆ.. ಈವಾಗ್ ದಯವಿಟ್ಟು ನಾನೇ ಮಾಡಕ್ಕೆ ಬಿಡಮ್ಮಾ…”

ಸರಸ್ವತಿ ಅಜ್ಜಿ, ” ಹೂಂ… ಆದ್ರೇ ನಿನ್ ಹತ್ರ ಬೇರೇನೂ ಕೇಳಿಲ್ಲ ನಾನು.. ಇದೊಂದೇ ಕೊಡೆ… ಈ ಪಾಪು ನಂದು…”

ಹಿಮಾಜ್ಜಿ, “ಆಯ್ತಮ್ಮಾ ತಾಯೇ ಬಾ… ನಿಂದೇ ಮಗು… ನಿಂಗೋಸ್ಕರನೇ ಇವ್ನು… ನಂಗೊತ್ತಿಲ್ವಾ… ಪಾಪ ಅವ್ನ ಬಾಯಲ್ಲಿ ಹೇಳಕ್ಕಾಗದೇ ಇದ್ರೂ ಕಣ್ಣ್ ಹೇಳ್ತಾ ಇದೆ… ಬಾ…”

ಅಲ್ಲಿಗೆ ಅವಳ ಆಸೆ ನನ್ ಆಸೆ ಫಲಿಸ್ದಂಗಾಯ್ತು…

“ಲೋ ಮಗನೇ ಇಷ್ಟ್ ವರ್ಷ ನಾನ್ ಮಾಡಿದೀನಿ ಅವ್ಳಿಗ್ ಬಿಟ್ಕೊಡ್ತೀನಾ… ಹ್ಹಹ್ಹಹ್ಹ…”

“ಹೂಂ ಅಜ್ಜೀ ನೀನ್ ಸೂಪರ್!!…”

“ಅಲ್ಲಾ… ಇಷ್ಟ್ ವರ್ಷ ನಾನ್ ಮಾಡ್ತಾ ಬಂದಿದೀನಿ… ನಾನ್ ಸತ್ಹೋದ್ ಮೇಲೇ…”

ನಾನು, ” ಲೇಯ್ ನಿಂಗ್ ಏನ್ ತಲೆ ಕೆಟ್ಪಿದ್ಯಾ? ಏನ್ ಏನೋ ಯೋಚನೇ ಮಾಡ್ತೀಯಾ…..”

ಅವ್ಳು, ” ಹಂಗಲ್ವೋ… ಒಂದ್ವೇಳೇ….”

ನಾನು, “ಒಂದೂ ಇಲ್ಲ ಎರಡೂ ಇಲ್ಲ…. ಸುಮ್ನಿರು…”

ಅವ್ಳು, “ನಾನ್ ಸತ್ರೇ ನೀನ್ ಅಳ್ಬಾರ್ದು… ಅತ್ರೂ ನಂಗ್ ಕೇಳ್ಸ್ಬಾರ್ದು…. ಗೊತ್ತಾಯ್ತಾ…”

“ಹಾಂ… ಸರಿ ಸರೀ… ಹೋದ್ಮೇಲ್ ಅಲ್ವಾ… ನೋಡೋಣ… ಈವಾಗ್ ಸುಮ್ನಿರು…”

ಹಂಗೇ ಸುಮ್ನಾಗಿ ಅವ್ಳು ಸ್ನಾನ ಮಾಡ್ಸಿದ್ಳು…

ಹಿಂಗೆಲ್ಲಾ ನಮ್ ಸರಸ್ವತಿ ಅಜ್ಜೀ ಕಥೆ…

ಅದ್ಕೇ ಒಂದ್ ಸ್ವಲ್ಪ ನೋವಾದ್ರೂ ಖುಷೀಲೀ ಕಳ್ಸಿಕೊಡ್ಬೇಕು ಅಂತ ನಗ್ನಗ್ತಾ ಇದೀನಿ… ಬೈ ದ ವೇ ಈ ಅಜ್ಜೀ ನನ್ ಫೇವರೇಟ್ ಅಜ್ಜಿ ಆಗಿದ್ದು ಇನ್ನೊಂದ್ ವಿಷ್ಯ ಇದೆ… ಅದು ಯಾರ್ಗೂ ಹೇಳಿಲ್ಲ ನಾನು ಹೇಳದೂ ಇಲ್ಲ… ಯಾಕಂದ್ರೇ ಇದು ಅಜ್ಜೀದು ನಂದು ಸೀಕ್ರೇಟ್.. ಅಷ್ಟೇನ್ ದೊಡ್ದ್ ಅಲ್ಲ… ಆದ್ರೇ ತುಂಬಾ ವೇಲ್ಯೂ ಕೊಡ್ತೀನಿ ಅದ್ಕೇ..  ಅದನ್ನ ಮತ್ತೆ ನಾನ್ ಹೇಳಿದ್ರೇ ದೊಡ್ಡ್ ರಂಬಾರೂಟಿ ಆಗತ್ತೆ…

ಬಿಡಿ…

ಅಜ್ಜೀ ಮುಖ ಯಾವಾಗ್ಲೂ ನಗ್ನಗ್ತಾ ಇರೋದು… ಯಾರ್ಗೂ ಕೇಡು ಬಯ್ಸಿದೋಳಲ್ಲ… ಇವತ್ತೂ ಹಂಗೇ ನಗ್ತಾನೇ ಇದಾಳೆ ಖುಷೀಲಿ ಹೋಗಿದಾಳೆ… ಅಬ್ಬಾ ಅಲ್ಲೂ ಚನಾಗಿದ್ರೆ ಸಾಕು…

ಎಲ್ಲಾ ವಿಧಿಗಳನ್ನ ಮುಗ್ಸೀ ದಹನ ಮಾಡೋವಾಗಂತೂ, ನನಗೆ, ಈ ನಾದಭೃಂಗಂಗೆ, ಅವಳ ನಿಷ್ಕಲ್ಮಶ ನಗು ಮರೆಯಾಯ್ತು…

(ಮುಂದುವರೆಯುವುದು…)

Photo by Yogendra Singh from Pexels

Spread the knowledge!

Disclaimer

This is a personal blog. Any views or opinions represented in this blog are personal and belong solely to the blog owner and do not represent those of people, institutions, or organizations that the owner may or may not be associated with a professional or personal capacity unless explicitly stated. Any views or opinions are not intended to malign any religion, caste, race-ethnic group, club, organization, company, or individual. All content provided on this blog is for informational purposes only. Lifelance makes no representations as to the accuracy or completeness of any information on this site or found by following any link on this site. Lifelance will not be liable for any errors or omissions in this information nor for the availability of this information. The owner will not be liable for any losses, injuries, or damages from the display or use of this information..

Health Disclaimer

The opinions expressed in this article are the personal opinions of the author. lifelance is not responsible for the accuracy, completeness, suitability, or validity of any information on this article. All information is provided on an as-is basis. This content including advice provides generic information only. It is in no way a substitute for a qualified medical opinion. Always consult a specialist or your own doctor for more information. lifelance does not claim responsibility for this information.

Leave a Reply

Your email address will not be published. Required fields are marked *